Tuesday, 2 May 2017

ಮಲ್ಟಿಫ್ಲೆಕ್ಸ್‌ಗಳಲ್ಲಿ 200 ರು. ಫಿಕ್ಸ್ ಎಂದಿದ್ದ ಸಿದ್ದರಾಮಯ್ಯ ತಾವೇ 1.040 ಕೊಟ್ಟು ಬಾಹುಬಲಿ 2 ವೀಕ್ಷಿಸಿದ್ದಾರೆ

ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳಲ್ಲಿ ಟಿಕೆಟ್ ದರ 200 ರುಪಾಯಿ ಫಿಕ್ಸ್ ಎಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ 1,040 ರುಪಾಯಿ ಕೊಟ್ಟು ಬಾಹುಬಲಿ 2 ಚಿತ್ರವನ್ನು ವೀಕ್ಷಿಸಿರುವುದು ಇದೀಗ ಟೀಕೆಗಳಿಗೆ ಗುರಿಯಾಗಿದೆ. 
ಕಳೆದ ಬಜೆಟ್ ನಲ್ಲಿ ಸಿದ್ದರಾಮಯ್ಯ ಅವರು ಮಲ್ಟಿಫ್ಲೆಕ್ಸ್ ಗಳಲ್ಲಿ ದುಬಾರಿ ಬೆಲೆಯನ್ನು ನಿಗದಿಪಡಿಸಲಾಗುತ್ತಿದ್ದು ಇನ್ನುಂದೆ ಎಲ್ಲಾ ಮಲ್ಟಿಫ್ಲೆಕ್ಸ್ ಗಳ ಟಿಕೆಟ್ ದರ 200 ರುಪಾಯಿಗೆ ಮಿತಿಗೊಳಿಸುವುದಾಗಿ ಹೇಳಿದ್ದರು. ಇದು ಮೇ 1 ರಿಂದ ಅನ್ವಯವಾಗಲಿದೆ ಎಂದು ಹೇಳಿದ್ದ ಅವರೇ ಮೇ 1ರಂದೇ 1,040 ರುಪಾಯಿಯಂತೆ 50 ಟಿಕೇಟ್ ಗಳನ್ನು ಬುಕ್ ಮಾಡಿ ಚಿತ್ರ ವೀಕ್ಷಿಸಿದ್ದಾರೆ. 
ಸಿದ್ದರಾಮಯ್ಯ ಅವರು ಪುತ್ರ ಡಾ. ಯತೀಂದ್ರ ಹಾಗೂ ಮೊಮ್ಮಗ ಭವನ್ ಸೇರಿದಂತೆ 48 ಮಂದಿ ಜತೆ ಓರಿಯನ್ ಮಾಲ್ ನಲ್ಲಿ ಬಾಹುಬಲಿ 2 ಚಿತ್ರ ವೀಕ್ಷಿಸಿದರು. ಪರ ಭಾಷಾ ಚಿತ್ರವೊಂದಕ್ಕೆ 1,040 ರುಪಾಯಿ ಕೊಟ್ಟು ಚಿತ್ರ ನೋಡಿರುವುದಕ್ಕೆ ಟ್ವೀಟರಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

No comments:

Post a Comment